Saturday, October 17, 2015

ಹೆಸರಿಡದ ಕವನಗಳು

1.
ಸಾಗರ ತೀರವು ಸೇರಿದೆ ಈಗ
ನಡೆಯುತ ಹೋಗು ನೀ ಮುಂದೆ
ಹಾಯಿ ದೋಣಿಯ ನಾವಿಕ ನಾನು
ಹೋಗುವೆ ಸಾಗರದಿಂದೆ
ಕಾದಿಹ ಸೂರ್ಯನು ಮುಳುಗಿಹನೀಗ
ಕೆಂಪಿದೆ ಪಡುವಣ ಆತನದು
ಮನಸಿನ ಚಂದ್ರಮ ಎಲ್ಲೋ ಹೋಗಿರೆ
ಕಪ್ಪಗೆ ಕರಗಿದೆ ಮೋಹವದು
ಮನದಲಿ ಓಡಿದೆ ಅಲೆಗಳ ಓಟ
ನಿನ್ನಯ ಹೆಸರನು ಹೇಳುತಲಿ
ತೀರದ ಮೇಲಣ ನಡೆಯದು ದೋಣಿ
ಸಾಗರವದರದು ಎಂದು ಕಲಿ.





೨.

ಅಷ್ಟ ವರ್ಣಗಳ ಕಾಮನಬಿಲ್ಲು !!
ಹೇಗಾದರೂ ನೀ ಓಟದಿ  ಗೆಲ್ಲು !
ಮೊದಲಿನ ಮೂರನು ದಾಟಿದೆ ನಾನು
ಮುರಿಯದೆ ಯಂತ್ರ ಬಿಚ್ಚದೆ ಗಾಲಿ
ನಾಲ್ಕನೆ ಬಾರಿ ಎಳೆದೇ ಬಿಟ್ಟಿತು
ಎಂದೂ  ಕಾಣದ ಬೇಲಿ
ದಾಟಿಯೆ  ಬಿಟ್ಟೆ ದಾಟಿಯೆ  ಬಿಟ್ಟೆ
ಕಾಮನಬಿಲ್ಲಿನ ಸಪ್ತ ವರ್ಣ
ನೇರ ಮಾರ್ಗದಿ ಮುರಿದೇ  ಹೋದರೂ
ಪ್ರದಕ್ಷಿಣ ಪಥದಲಿ ಜೋಡಿಸಿ ಇಟ್ಟೆ
ಕೆನೆಯಿತು ಮನದಲಿ ಅಪಹಾಸ್ಯದ ಕುದುರೆ
ಕುಡಿಸಿದೆ ಅದಕೆ ಆನಂದದ ಮದಿರೆ
ಓಟದಿ ಬೇಕು ಏಳು ಬೀಳು
ಆಟದಿ ಇಲ್ಲ ಮೇಲು ಕೀಳು ...!!
೩.
ಪಾರಿಜಾತವು ಹೇಳಿತು ನನಗೆ
ಶ್ರೀಕೃಷ್ಣನ ಪ್ರೇಮದ ಪರಿಯ
ಭಾಮೆಯು ನಡೆದಳು ಬಿಸಿಲಲ್ಲಿ
ಸೂರ್ಯನು ಕರಗಿದ ಮೋಡದಲಿ
ಅದು ಆತನ ಪ್ರೀತಿಯ ಭಾಷೆ
ರುಕ್ಮಿಣಿಯರ್ಪಿತ ತುಳಸಿಯದು
ತೂಗಿತು ಆತನ ತನುವನ್ನು
ಅದು ಆತನ ಪ್ರೀತಿಯ ರೀತಿ
ಮುಗಿಸಿದನಾತನು  ನರಕಾಸುರನ
ಶರಣಾದರು ಎಲ್ಲ ಬಂದಿಗಳು
ಸ್ವೀಕರಿಸಿದನವನು ಎಲ್ಲರನು
ಹದಿನಾರುಸಾವಿರ ಸ್ತ್ರೀಯರನು
ಈತನೆ ಕರಗುವ ಮನಸಿನ ಹರಿ
ಪಾಂಚಾಲಿ ಕರೆದಳು ಸಭೆಯಲ್ಲಿ
ನೀರೆಗೆ ನೀಡಿದ ಸೀರೆಯನು
ಅದು ಆತನ ವಾತ್ಸಲ್ಯದ ಧಾರೆ
ಕೊನೆಯಲಿ ಹೇಳಿತು ಸೌರಭ ಸಾರ
ಇದನೆಲ್ಲವ ನಾ ನೋಡಿದರಿಂದಲೆ
ಶಾಶ್ವತವಾಗಿಹೆ ಭೂಮಿಯಲಿ


೪.
ಗೆಳೆತಿ ನೀನು ಹೋದೆಯೆತ್ತ
    ಹುಡುಕುತಿರುವೆ ಜಾಡು
ನೀನಾಡಿದ ಹೃದಯವಿಂದು
   ಬರಿಯ ಎಲುಬು ಗೂಡು
ನೀ ಮೀಟಿದ ವೀಣೆಯಿಂದು
   ಶಬ್ದವಿರದ ಹಾಡು
  ನೀ ನಡೆದಿಹ ಕಾಡದೀಗ
    ಬರಿಯ ಮರಳುಗಾಡು
   ನನ್ನ ಎಲ್ಲ ನಿನ್ನೆಗಳನು
   ಬರೆದೆ ನೀನು ನೋಡು
ನನ್ನ ಮನದ ಒಳಗೆ ನೀನು
ನದಿಯ ತೆರದಿ ಹಾರಿದೆ ಹರಿದೆ
ಮನದ ಭಿತ್ತಿ ಭಿತ್ತಿಯಲ್ಲೂ
ನಿನ್ನ ಚಿತ್ರ ಬರೆದೆ
ನೀ ಹರಿದಿಹ ಹಾದಿಯಲ್ಲಿ
ಮರಳು ಏಕೆ ಸುರಿದೆ ?
ನಿನ್ನ ಎಲ್ಲ ಚಿತ್ರಗಳಲಿ
ಕಪ್ಪಗಿಯೆ  ಉಳಿದೆ




೫.

ನಕ್ಕೆ ಏಕೆ ಅಂದು ನೀನು ಹೇಳಿ ನಿನ್ನ ಹೆಸರು
ಅರಿಯದಂತೆ ಹೃದಯ ತುಂಬ ನಿನ್ನ ಹೆಸರ ಹಸಿರು
ಮರೆತೂ ಮುಂದೆ ಹೋಗದಿರು ನಿಲ್ಲಬಹುದು ಉಸಿರು
ನಗುತ ಈಗ ಕೇಳದಿರು ಪ್ರಶ್ನೆಗಳನು ಕೆಲವು
ಮರೆಯುತಿಹೆನು ನಿನ್ನ ನೋಡಿ ಕಷ್ಟಗಳನು ಹಲವು


೬.

ಇರಲೆ ಬೇಕು ನಿನಗೂ ಒಬ್ಬ ಇದ್ದೂ ಇರದ ಕುಚೇಲ
ಎಂದು ನೀನು ಬರುವೆಯಿತ್ತ ಎನುತ ಕಾವ ಸುಶೀಲ
ಹಸಿವು ತನ್ನದು, ಪ್ರೀತಿ ನಿನ್ನದು, ನಗುತ ಜಗವ ಮರೆಯುವ
ಜತೆಯಲಿರಲು ನೀನು ನನ್ನ, ಇಂದ್ರ ಕದವ ತೆರೆಯುವ

ಇರಲು ಬಹುದು ಜಗಕೆ ಎಲ್ಲ ದೊರೆಯು ನೀನು ಇಂದು
ಆಟವಾಡಿ ಜಗವ ನೋಡಿ ನಗುತಲಿದ್ದೆವಂದು
ಅಶನವಿದೆ ಹಿಡಿಯಲಿಷ್ಟು ಬಾ ನಿನಗೆ ಎಂದು
ಜಗವು ಜೊತೆಯಲಿರದಿರೇನು ನೀನೆ ಎನಗೆ ಬಂಧು

ಬೇಕು ಎಂದು ಬೇಡಲಿಲ್ಲ ಮದಿರೆ ಹೊನ್ನು ಮಣ್ಣು
ಕಾಣಬೇಕು ಗೋಪ ಎನಗೆ ನಗುವ ನಿನ್ನ ಕಣ್ಣು
ಕುಡಿಯಬೇಕು ಬಡವನಲ್ಲಿ ನಗುತ ಎರಡು ಬಿಂದು
ಅಷ್ಟಾದರೆ ದೊರಕಿತೆನಗೆ ನಗಲು ಸುಖದ ಸಿಂಧು



೭.

ನಗುತಿಹುದು ವಿಧಿ ಇಂದು ಒಂಟಿ ನೀನಹುದೆಂದು
ಮನವಿಹುದು ಧೃತಿಗೆಡದೆ ಗಂಟು ಬಿಡಿಸುವೆನೆಂದು
ಮರುಗಿದರೆ ಏನಿಹುದು ವಿರಹ ಮದಿರೆಯ ಕುಡಿದು
ಬರಹವದು ಆತನದು ದೂರ ನಿಂತರೂ ಬಿಡದು

ನಗುತಿರಲು ನೀನಿಂದು ಬದುಕು ನಿನ್ನದು ಎಂದು
ಕಾದಿಹುದು ನಿನಗೆಂದು ಅವನೆ ಕಳಿಸಿದ ಬಿಂದು
ಅಮೃತವದು ಸುರಿಯುವುದು ಎನುತ ಕಾದರೆ ಇಂದು
ಉರಿದಿಹುದು ಸೌಭಾಗ್ಯ ಸುಡುವ ಬಿಸಿಲಲಿ ಬೆಂದು

ನಡೆಯುತಿರು ನಡೆಯುತಿರು ಗುರಿಯ ಸೇರುವ ತನಕ
ಸಮಯವನು ಸೇರಿಸದು ಗೆರೆಯ ದಾಟುವ ತವಕ
ಮನದೊಳಗೆ ತುಂಬಿರಲು ನಾಳೆ ಕಾಯುವ ಜತನ
ಸಿಗದಿರದೆ ನಿನಗೆಂದೆ ಹರಿಯಿತ್ತ ಪತನ



೮.ಕ್ಷಮೆ ಇರಲಿ
ಮಳೆ ಬಂದರೇ ಬರಲಾಗದು ಗೆಳತೀ ಇರೂ ಅಳದೇ
ಪ್ರತಿ ವಾರವೂ ಸಿಗಲಾಗದು ನಗುತಾ ಇರೂ ಇರೂ
ಯಾರನೂ ದೂರಲಿ ಮಳೆಯದು ಬರುತಿರುವಾಗ
ನಗುತಲೇ ನಿಲ್ಲಲಿ ಹೇಗೆ ಈಗ
ನೆನೆಯುವುದೂ ಈಗ ನೆನೆಯುವುದೂ ಈ ಹನಿಗಳಲಿ ಇದು ಸಾಧ್ಯಾನಾ
ಮಳೆಯೊಳಗೇ ನಿನ ಕಾಣುವುದೇ ನಗು ಅರಸುವುದೇ ನಿಜ ಪ್ರೀತೀನಾ

ಯಾಕೆ ಮರೆತು ಬಿಟ್ಟೆನಾ ನೀನು ಕೊಟ್ಟ ಛತ್ರಿಯೊಂದನು
ನಮ್ಮ ಪ್ರೇಮಚಂದ್ರಗೇ ನಾನೆ ಕಪ್ಪು ಮೋಡವಾದೆನೆ
ಪ್ರತಿ ಉಸಿರಲಿ ಹೇಳಿದ ಹೆಸರಾ ಮಳೆ ನಿಲ್ಲಿಸಿತೊಮ್ಮೆಲೆ ಈಗ
ಜತೆ ಇರದಿಹ ಒಂಟಿಯು ನಾನು ಏನು ಮಾಡಲೀ
ನೆನೆಯುವುದೂ ಈ ಹನಿಗಳಲಿ ಇದು ಸಾಧ್ಯಾನಾ
ಮಳೆಯೊಳಗೇ ನಿನ ಕಾಣುವುದೇ ನಗು ಅರಸುವುದೇ ನಿಜ ಪ್ರೀತೀನಾ

ಇನ್ನು ಮುಂದೆ ನಗುವಿಗೆ ಇಲ್ಲ ಒಂದರ ಒಂದು ಕಾರಣ
ಛತ್ರಿ ಇದ್ದು ನೆನೆಯುವಂತೆಯೇ ಅನಿಸಿತೇಕೆ ಇಂದು ಈ ದಿನ
ನಿನ ನೆನಪಲಿ ಇರುವೆನು ನಾನು ನಗುನಗುತಲಿ ಬಾಳುವೆಯೇನು
ನೀನಿಲ್ಲದ ಉಸಿರಿಹುದೇನು ನಾನು ಬಾಳೆನೂ
ನೆನೆಯುವುದೂ ಈ ಹನಿಗಳಲಿ ಇದು ಸಾಧ್ಯಾನಾ
ಮಳೆಯೊಳಗೇ ನಿನ ಕಾಣುವುದೇ ನಗು ಅರಸುವುದೇ ನಿಜ ಪ್ರೀತೀನಾ

Tuesday, August 21, 2012

Race with the thoughts.

I'm a guy with child's view of wondering at everything around me. I wonder at the simplest everyday happening each time I see it happens! And I even wonder why I'm like this!! This year it has rained very little. Today is a sunny day as usual. I have got fever cold and cough! Being on bed as I have got nothing to do I found a news paper beside me having almost 2 month older date on it. Everyone of you must have gone through a similar situation one or the other day. And right now I gotta go through the page. Fortunately its a part of Friday's news paper with bollywood news all over it. Who is not interested to watch sexy hot bollywood babes??;) though am not interested in the news am interested in the photos above and below them!!

Now I got to tell you where I live. Its a very small town with around ten thousand people. People here are more religious and orthodox. Even in this 21st century in places like ours no girl is supposed to walk with a guy who is not her blood relative!!

Now coming back to Friday magazine! There was a picture where a hero was kissing a heroine!! I just lost in thoughts!!
How the hell he kiss a girl like that in front of the big movie set?!! At least a few hundred people?! And later its going to be shown to the whole world?!! Isn't he human? won't he aroused while doing it? Leave him what about that lady partner with him?!!! How would she behave so normal?  What they are really involved in?? Just acting? Is that really possible??

Hey have you taken the medicine? Mom asked aloud. I just came down to earth!!! I just followed her question which had order in it. As I drunk water after swallowing the capsule my mind was asking me- whether I'm the only guy who get these kinda stupid thoughts or at times everybody do it? God knows. Am feeling drowsy!! Wanna sleep.
ZzzzzzzzZzzz

Tuesday, July 17, 2012

Day dreaming

<p>Oh!! No need of asking, am rather sure that everybody do this.. Yes day dreaming!! This is one of my jobs which&#160;I do with all eager and interest. If you are a student then you would surely come across this interesting job a lot many times. As a student even I do it more than anything else. Probably that kills a lot of time in the restricted 24 hours time zone of a day. But what? I'm addicted to it. And though I try to stop I can't stop it. Well, its tough to give up it because, I get tensed up thinking what my mind should do in that time if I stop doing it?!! Mind is like monster. It can never be in an idle state it keeps doing things. So, that proverb came "An idle mind is a devils workshop". Instead of making it devils workshop I just make it my own by doing something like day dreaming, writing poems etc. I believe day dreaming is not really waste of time! Of course it yeilds happiness!! Just imagine that you are in a plane sitting beside Sachin Tendulkar or John Abraham or world's sexist woman Katrina Kaif!!! Eh blush!! See, how happy you are just by imagining it. Yes it keeps you happy. Thanks to the almighty who gave us the ability of imagining things around us which are beyond our reach. You can touch the moon or hit a six or you can drive away your new BMW or do anything you want... Who says this world is jar of sorrow? It is jar of sweet honey and happiness. Change the way you look at it. To be happy you must deserve it. Keep dreaming!! Have happiness!! Give happiness!!

ಭ್ರಷ್ಟಾಚಾರ ಮತ್ತು ಲಂಚ

 ಮತ್ತು ಲಂಚ ಇವೆರಡು ವಿಷಯಗಳಷ್ಟು ದೀರ್ಘ ಚರ್ಚಿತ ವಿಷಯ ಕಳೆದ ದಶಕದಲ್ಲಿ ಬೇರಾವುದೂ ಇಲ್ಲವೆನ್ನುವುದು ನನ್ನ ಅನಿಸಿಕೆ. ಜನಸಾಮಾನ್ಯರಿಂದ ಹಿಡಿದು ಜನನಾಯಕರವರೆಗೆ ಎಲ್ಲರೂ ಈ ವಿಷಯವನ್ನು ಒಂದಲ್ಲದಿದ್ದರೆ ಇನ್ನೋದೆಡೆ  ಚರ್ಚಿಸುತ್ತಾರೆ. 2011-2012ರಲ್ಲಂತೂ ಅಣ್ಣ ಹಜಾರೆಯವರಿಂದಾಗಿ ಎಲ್ಲರೂ ಭ್ರಷ್ಟಾಚಾರದ ಮರವನ್ನು ಬುಡಸಮೇತ ಉರುಳಿಸುವ ಚಿಂತನೆಗೆ ಶುರು ಹಚ್ಚಿದ್ದರಾದರೂ ಅದು ಕಲ್ಪನೆಗೂ ಮೀರಿದಷ್ಟು ಬೃಹತ್ ಮತ್ತು ಬಲಿಷ್ಟವೂ ಆಗಿದ್ದರಿಂದ ಏನೂ ಆಗದೇ ಹೋಯಿತು. ಭ್ರಷ್ಟಾಚಾರದ ಬಗ್ಗೆ ಚಿಂತನೆಗೆ ಶುರುವಿಟ್ಟರೆ ಅದು ಕೊನೆ ಮೊದಲಿಲ್ಲದ ವಿಚಾರ. ಇತಿಹಾಸದ ಪುಟ ತಿರುಗಿದರೆ ಶತಮಾನದಷ್ಟು ಹಳೆಯ ಉದಾಹರಣೆಗಳು ಬೇಕಷ್ಟು ಸಿಗುತ್ತವೆ. ನನಗನಿಸುತ್ತದೆ ವಿಜ್ಞಾನದ ಬೆಳವಣಿಗೆ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಸಹಾಯವಿತ್ತಿದೆ ಎಂದು. ವಿಜ್ಞಾನ ಮತ್ತು ವೈಜ್ಞಾನಿಕ ದೃಷ್ಟಿಕೋನಗಳು ಭ್ರೂಣಾವಸ್ಥೆಯಲ್ಲಿರುವಾಗ ದೇವರ ಮೇಲಿನ ಭಯ ಅಥವಾ ಭಕ್ತಿ, ಮರಣಾನಂತರ ಉಂಟಾಗಬಹುದಾದ ದುರ್ಗತಿ(!!)ಯ ಭೀತಿ ಇವು ಯಾರಿಗಾದರೂ ಮಾಡಿರಬಹುದಾದ ವೈಯಕ್ತಿಕ ಲಾಭಕ್ಕಿಂತ  ಸಾಮಾಜಿಕ ಲಾಭವೇ ಹೆಚ್ಚು. ಪ್ರತಿಯೊಬ್ಬನೂ ಇಹದಲ್ಲಿ ದೊರೆಯುವ ಶಿಕ್ಷೆಗಿಂತ ಯಾರೂ ಕಾಣದ ಪರದಲ್ಲಿ ದೊರಕಬಹುದಾದ ಶಿಕ್ಷೆಗೆ ಹೆಚ್ಚು ಅಂಜಿದ್ದರಿಂದ ಕಾಪಾಡಲ್ಪಟ್ಟದ್ದು ಸಾಮಾಜಿಕ ಸ್ವಾಸ್ಥ್ಯ ಮತ್ತು ನೈತಿಕ ಮೌಲ್ಯಗಳು. ವಿಜ್ಞಾನ ಬೆಳೆಯುತ್ತಾ ಜನರ ಚಿಂತನಾ ವಿಧಾನ ಹಾಗೂ ಪರಿಧಿ ಬದಲಾಯಿತು ಮಾತ್ರವಲ್ಲ ಬೆಳೆಯಿತು ಕೂಡ. ತತ್ಪರಿಣಾಮ ದೈವ-ದೇವರಲ್ಲಿ, ಮರಣಾನಂತರದ  ಪರಲೋಕದಲ್ಲಿನ ಭಯ ದೂರವಾಗುತ್ತಾ  ಸಾಗಿತು. ಇದು ಮುಂದಿನ ನೈತಿಕ ಅಧ:ಪತನಕ್ಕೆ ರಹದಾರಿಯಾಯಿತು. ಯಾವಾಗ ಒಂದು ಸಮಾಜದಲ್ಲಿ ನೈತಿಕ ಅಧ:ಪತನವಾಗುತ್ತದೋ ಅದು ಭ್ರಷ್ಟಾಚಾರದಂಥ  ವಿಚಾರಗಳಿಗೆ ಎಡೆ ಮಾಡಿಕೊಡುತ್ತದೆ. ಇಂದಿನ ನಮ್ಮ ಸಮಾಜದಲ್ಲಗುತ್ತಿರುವುದೂ ಅದೇ.ಸರಿ ಮತ್ತು ತಪ್ಪುಗಳ ನಡುವಿನ ರೇಖೆ ಅಳಿಸಿದರೆ ಸರ್ವಸ್ವವವೂ ಅಯೋಮಯ.

ಭ್ರಷ್ಟಾಚಾರ ಎಷ್ಟರಮಟ್ಟಿಗೆ ನಮ್ಮ ನರನಾಡಿಗಳಲ್ಲಿ ಸೇರಿಕ್ಕೊಂಡಿದೆಯೆಂದರೆ ಎಷ್ಟೋ ಬಾರಿ  ನಾವೇ ಲಂಚ ನೀಡುತ್ತಿದ್ದರೂ ನಮ್ಮ   ಅರಿವಿಗೆ ಬಾರದೇ ಹೋಗುತ್ತದೆ. ನನ್ನ ಸುತ್ತಲೂ ಗಮನಿಸಿದರೆ ನನಗಂತೂ ಹಲವು ಉದಾಹರಣೆಗಳು ಸಿಗುತ್ತವೆ. ಯಾವುದೇ ಗ್ರಾಮೀಣ ಪ್ರದೇಶದ ಸರಕಾರೀ ಬಸ್ಸುಗಳಲ್ಲಿ ನೀವು 2-3km ಹೋಗುವ ಪ್ರಸಂಗವಿದೆಯೆಂದಿಟ್ಟುಕ್ಕೊಳ್ಳಿ 100ಕ್ಕೆ 90 ಶೇಕಡಾ ನಿಮಗೆ ಟಿಕೇಟು ದೊರೆಯುವುವ ಅವಕಾಶಗಳಿಲ್ಲ. (ನೀವು ಕೇಳದೆ ಇದ್ದ ಪಕ್ಷದಲ್ಲಿ,) ಇದರಲ್ಲಿ ಹಲವರು ತಪ್ಪನ್ನೇ  ಕಾಣರು! ನೀವು ನೀಡುವ ದುಡ್ಡು  ನೇರವಾಗಿ ನಿರ್ವಾಹಾಕರ ಜೇಬು ಸೇರುವ ಸಂದರ್ಭವೇ  ಜಾಸ್ತಿ(ಪ್ರಾಮಾಣಿಕ ನಿರ್ವಾಹಕರ ಕ್ಷಮೆ ಕೋರುತ್ತ!). ಇಂಥ ಸಂದರ್ಭದಲ್ಲಿ ನನಗೆ ಉಂಟಾಗುವ ಅನುಮಾನವೇನೆಂದರೆ  ಟಿಕೇಟು ನೀಡುವುದು ಅವರ ಕರ್ತವ್ಯವೋ ಅಥವಾ ಕೇಳಿ ಪಡೆಯದಿರುವುದು ನಮ್ಮ ತಪ್ಪೇ? ಉತ್ತರ ಅಲ್ಲೇ ಇರುತ್ತದೆ "ಟಿಕೇಟು ಕೀಳಿ  ಪಡೆಯಿರಿ".. ಹಾಗಿದ್ದರೆ ನಿರ್ವಾಹಕರು ಇದಕ್ಕೆ ಸ್ವಲ್ಪವೂ ಜವಾಬ್ದಾರರಲ್ಲವೇ??   ದೇವನೇ ಬಲ್ಲ...

ಲಂಚ ನೀಡುವುದು ಎನ್ನುವಾಗ ಒಂದೊಮ್ಮೆ ನನ್ನ ಮನಸ್ಸಿನಲ್ಲಿ ಮೂಡಿದ ಅನುಮಾನಗಳಲ್ಲಿ ಇದೂ ಒಂದು--
 ಲಂಚ ನೀಡುವುದು ಕೇವಲ ದುಡ್ಡಿನ ರೂಪದಲ್ಲಿರಬಹುದೆನ್ನುವುದು ಕಲ್ಪನೆ ಮಾತ್ರ. ಉದಾಹರಣೆಗೆ ಸ್ವಾತಂತ್ರ ಪೂರ್ವ 1975ರ ನವೆಂಬರ್ ನಲ್ಲಿ   ಕಾರ್ತಿಕ ಶುಕ್ಲ ಪೌರ್ಣಮಿಯಂದು ಕವಿ ಬಂಕಿಮಚಂದ್ರ ವಿರಚಿತ ವಂದೇ ಮಾತರಂ ಆನಂತರದ  ಸತತ 60 ವರ್ಷಗಳ ಕಾಲ ಸ್ವಾತಂತ್ರ್ಯದ ರಣಮಂತ್ರವಾಗಿತ್ತು. ಆದರೆ 1936ರ ಕೊಲ್ಕತ್ತಾದ ರಾಷ್ಟ್ರೀಯ ಅಧಿವೇಶನದಲ್ಲಿ ಭಾರತೀಯ ಕಾಂಗ್ರೆಸ್ "ಮುಸ್ಲಿಮರಿಗಾಗಿ" ಎನ್ನುವ  ಕಾರಣವನ್ನಿಟ್ಟುಕ್ಕೊಂಡು  ವಂದೇ ಮಾತರಂ ವಿಭಜನೆ ಮಾಡಿತು. ಮುಂದೆ ಸ್ವಾತಂತ್ರ್ಯಾನಂತರದ ಚುನಾವಣೆಯ  ದೂರದೃಷ್ಟಿಯೇ  ಇಂಥ ವಿಭಜನೆಯೊಂದಕ್ಕೆ ಮೂಲ ಕಾರಣವಾಗಿರಬೇಕೆನ್ನುವುದು ನನ್ನ ಅನಿಸಿಕೆ. ಈ ಮೂಲಕ ಆ ಒಂದಿಡೀ ಸಮುದಾಯಕ್ಕೆ ಲಂಚವಿತ್ತನ್ತಾಗಲ್ಲಿಲ್ಲವೇ?  ಅಂದಿನ ಆ ಕಾಂಗ್ರೆಸ್ಸಿನ ನಡೆ ಮುಂದೆ ದೇಶ ವಿಭಜನೆಗೂ ಮೂಲವಾಯಿತೆನ್ನುವುದು ಹಲವರ ದೃಷ್ಟಿಕೋನ. ಆದರೆ ಅದ್ಯಾವುದೂ ನಮ್ಮ ರಾಜಕಾರಣಿಗಳ ನಡೆಯನ್ನು ಬದಲಿಸಲಿಲ್ಲ.(ಬದಲಿಸುವುದೂ ಇಲ್ಲವೆನ್ನುವುದು ಖೇದಕರ.). ಇಂದಿಗೂ ಜಾಗತಿಕ ಮಟ್ಟದಲ್ಲಿ ಅನಾಗರಿಕವೆನಿಸುವಂಥ ಜಾತ್ಯಾಧಾರಿತ ಮೀಸಲಾತಿಗಳು ನಮ್ಮಲ್ಲಿವೆ. ಶಿಕ್ಷಣ ಕ್ಷೇತ್ರದಲ್ಲಂತೂ ಇದರಿಂದಾಗುವ ತೊಂದರೆಗಳು ಹಲವಾರು. ಶಿಕ್ಷಣ ಕ್ಷೇತ್ರದ ಮೀಸಲಾತಿಯ ದುಷ್ಪರಿಣಾಮ ದೇಶದ ಮುಂದಿನ ಹಲವು ದಶಕಗಳವರೆಗೂ ಮುಂದುವರಿಯಲಿದೆ. ಈ ಮೀಸಲಾತಿಯ ಮೂಲಕ, ಆಳುವವರು ಶ್ರೀಸಾಮಾನ್ಯನಿಗೆ ಲಂಚ ನೀಡುತ್ತಿದ್ದಾರೆಂದು ಯಾವತ್ತೂ ನಿಮಗನಿಸಿಲ್ಲವೇ? ಒಂದೊಮ್ಮೆ ಆಚರನೆಯಲ್ಲಿದ್ದಂತಹ ಮೇಲ್ವರ್ಗ-ಕೆಳವರ್ಗಗಳ ವ್ಯತ್ಯಾಸವನ್ನು ಇಂದು ಮೀಸಲಾತಿ ನೀಡಿ ಸರಿವಡಿಸುವ ಕ್ರಮ ಸರಿಯಿದೆಯೇನ್ದಾದಲ್ಲಿ ಶತಮಾನಗಳ ಹಿಂದಿನ ಬ್ರಿಟೀಷರ ಧಾಳಿಗೆ ಪ್ರತಿಯಾಗಿ ಇಂದು ಭಾರತ ಬ್ರಿಟನ್ ಮೇಲೆ ಧಾಳಿ ಮಾಡಬೇಕಿದೆ. ಈ ಮೇಲಿನ ವಾಕ್ಯದ ಎರಡನೆಯ ಭಾಗ ಹಾಸ್ಯಾಸ್ಪದ ಎಂದೆನಿಸುವ ನಮಗೆ ಮೊದಲನೆಯದೇಕೆ ಮೌಲ್ಯಯುತವಾಗಿ ಕಾಣುತ್ತದೋ ನಾನರಿಯೆ!!
ಇಷ್ಟೆಲ್ಲದರ ನಂತರವೂ ತಾಯಿ ಭಾರತಿಯ ಆಶೀರ್ವಾದದೊಂದಿಗೆ ಬದುಕುತ್ತಿರುವ ಭಾರತೀಯರ ಜೀವನ ಪ್ರೀತಿ, ಸಹನಾ ಕೌಶಲ ಅನನ್ಯವಾದುದು.  

ಮೇಲಿನ ಎಲ್ಲಾ ದೃಷ್ಟಿಕೋನಗಳು ನನ್ನ ವೈಯಕ್ತಿಕವಾದವು. ಜಗತ್ತಿನಲ್ಲೆಷ್ಟು ಮನಸ್ಸುಗಳಿವೆಯೋ ಅಷ್ಟು ಭಾವಗಳೂ, ಅನಿಸಿಕೆಗಳೂ, ಅಭಿಪ್ರಾಯಗಳೂ ಇದೆಯೆನ್ನುವುದು ನನ್ನ ನಂಬಿಕೆ.

Wednesday, July 4, 2012

ಮೊದಲ ಹೆಜ್ಜೆ

ಅಂತು ಇಂತೂ ಬ್ಲಾಗು ಬಂತು..!! I am not sure why I have started blogging.. But I felt its the easiest way to save my random thoughts than writing them down on to a paper...!! No problems of saving the pages or searching for a pen instead I can do it instantly after having a random thought..!!
          Even I'm not  sure how long I'm going to continue with blogging because since I born I never did anything continuously except sleeping-eating and similar kinda things without which its unable to live :P Probably that is the main reason why I am doing it.
         Well soon am going to upload something which may be readable..!! :)
         See you soon my dear blog :P :D